1 ಅರಸುಗಳು 13 : 1 (KNV)
ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ ಇಗೋ, ಕರ್ತನ ಮಾತಿನಂತೆ ದೇವರ ಮನುಷ್ಯನು ಯೆಹೂದದಿಂದ ಬೇತೇಲಿಗೆ ಬಂದನು.
1 ಅರಸುಗಳು 13 : 2 (KNV)
ಅವನು ಆ ಪೀಠಕ್ಕೆ ವಿರೋಧವಾಗಿ ಕರ್ತನ ಮಾತಿನಲ್ಲಿ ಕೂಗಿ--ಪೀಠವೇ, ಪೀಠವೇ, ಇಗೋ, ದಾವೀದನ ಸಂತಾನದಲ್ಲಿ ಯೋಷೀಯನೆಂದು ಹೆಸರುಳ್ಳ ಒಬ್ಬ ಕುಮಾರನು ಹುಟ್ಟುವನು; ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಉನ್ನತ ಸ್ಥಳಗಳ ಯಾಜಕರನ್ನು ಬಲಿಯಾಗಿ ಅರ್ಪಿಸುವನು; ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವೆಂದು ಕರ್ತನು ಹೇಳುತ್ತಾನೆ ಅಂದನು.
1 ಅರಸುಗಳು 13 : 3 (KNV)
ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ--ಕರ್ತನು ಇದಕ್ಕೆ ಹೇಳಿದ ಗುರುತೇ ನಂದರೆ--ಇಗೋ, ಬಲಿಪೀಠವು ಸೀಳಿಹೋಗಿ ಅದರ ಮೇಲೆ ಇರುವ ಬೂದಿಯು ಚೆಲ್ಲಲ್ಪಡುವದು ಅಂದನು.
1 ಅರಸುಗಳು 13 : 4 (KNV)
ಅರಸನಾದ ಯಾರೊಬ್ಬಾಮನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿ ದೇವರ ಮನುಷ್ಯನು ಕೂಗಿದ ಮಾತನ್ನು ಕೇಳಿದಾಗ ಅವನು ಪೀಠದ ಬಳಿ ಯಿಂದ ತನ್ನ ಕೈಚಾಚಿ--ಅವನನ್ನು ಹಿಡಿಯಿರಿ ಅಂದನು. ಆಗ ಅವನಿಗೆ ವಿರೋಧವಾಗಿ ಚಾಚಿದ ಅವನ ಕೈ ಹಿಂದಕ್ಕೆ ಎಳಕೊಳ್ಳದ ಹಾಗೆ ಒಣಗಿಹೋಯಿತು.
1 ಅರಸುಗಳು 13 : 5 (KNV)
ಇದಲ್ಲದೆ ಕರ್ತನ ಮಾತಿನಿಂದ ದೇವರ ಮನುಷ್ಯನು ಕೊಟ್ಟ ಗುರುತಿನ ಪ್ರಕಾರವೇ ಬಲಿ ಪೀಠವು ಸೀಳಿ ಹೋಗಿ ಬೂದಿಯು ಬಲಿಪೀಠದಿಂದ ಚೆಲ್ಲಲ್ಪಟ್ಟಿತು.
1 ಅರಸುಗಳು 13 : 6 (KNV)
ಆಗ ಅರಸನು ಪ್ರತ್ಯುತ್ತರವಾಗಿ ದೇವರ ಮನು ಷ್ಯನಿಗೆ--ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಕರ್ತನ ಕಟಾಕ್ಷವನ್ನು ಬೇಡಿಕೊಂಡು ನನಗೋಸ್ಕರ ಪ್ರಾರ್ಥನೆ ಮಾಡು ಅಂದನು. ಆಗ ದೇವರ ಮನುಷ್ಯನು ಕರ್ತನ ಕಟಾಕ್ಷವನ್ನು ಬೇಡಿಕೊಂಡ ದ್ದರಿಂದ ಅರಸನ ಕೈ ಗುಣವಾಗಿ ಮುಂಚಿನ ಹಾಗೆ ಆಯಿತು.
1 ಅರಸುಗಳು 13 : 7 (KNV)
ಅರಸನು ದೇವರ ಮನುಷ್ಯನಿಗೆ--ನೀನು ನನ್ನ ಕೂಡ ಮನೆಗೆ ಬಂದು ನಿನ್ನನ್ನು ಚೇತರಿಸಿಕೋ. ನಾನು ನಿನಗೆ ಒಂದು ಬಹುಮಾನ ಕೊಡುವೆನು ಅಂದನು.
1 ಅರಸುಗಳು 13 : 8 (KNV)
ಆದರೆ ದೇವರ ಮನುಷ್ಯನು ಅರಸನಿಗೆ ಪ್ರತ್ಯುತ್ತರವಾಗಿ--ನೀನು ನನಗೆ ನಿನ್ನ ಅರ್ಧ ಮನೆ ಯನ್ನು ಕೊಟ್ಟರೂ ನಾನು ನಿನ್ನ ಸಂಗಡ ಹೋಗುವದಿಲ್ಲ; ಈ ಸ್ಥಳದಲ್ಲಿ ರೊಟ್ಟಿ ತಿನ್ನುವದಿಲ್ಲ, ಕುಡಿಯುವದಿಲ್ಲ.
1 ಅರಸುಗಳು 13 : 9 (KNV)
ಯಾಕಂದರೆ--ನೀನು ರೊಟ್ಟಿ ತಿನ್ನಬೇಡ, ನೀರನ್ನು ಕುಡಿಯಬೇಡ; ನೀನು ಬಂದ ಮಾರ್ಗದಿಂದ ಹಿಂತಿ ರುಗಿ ಹೋಗಬೇಡ ಎಂದು ಕರ್ತನ ವಾಕ್ಯದಿಂದ ನನಗೆ ಆಜ್ಞೆ ಆಯಿತು ಅಂದನು.
1 ಅರಸುಗಳು 13 : 10 (KNV)
ಆದದರಿಂದ ಅವನು ಬೇತೇಲಿಗೆ ಬಂದ ಮಾರ್ಗದಿಂದ ಹಿಂತಿರಿಗಿ ಹೋಗದೆ ಮತ್ತೊಂದು ಮಾರ್ಗವಾಗಿ ಹೋದನು.
1 ಅರಸುಗಳು 13 : 11 (KNV)
ಆದರೆ ಬೇತೇಲಿನಲ್ಲಿ ಒಬ್ಬ ವೃದ್ಧನಾದ ಪ್ರವಾ ದಿಯು ವಾಸವಾಗಿದ್ದನು. ಅವನ ಮಕ್ಕಳು ಬಂದು ಆ ದಿನದಲ್ಲಿ ಬೇತೇಲಿನಲ್ಲಿ ದೇವರ ಮನುಷ್ಯನು ಮಾಡಿದ ಸಮಸ್ತ ಕ್ರಿಯೆಗಳನ್ನು ಅವನಿಗೆ ತಿಳಿಸಿದರು;
1 ಅರಸುಗಳು 13 : 12 (KNV)
ಅವನು ಅರಸನಿಗೆ ಹೇಳಿದ ಮಾತುಗಳನ್ನು ಸಹ ತಮ್ಮ ತಂದೆಗೆ ತಿಳಿಸಿದರು. ಆಗ ಅವರ ತಂದೆ ಅವ ರಿಗೆ--ಅವನು ಯಾವ ಮಾರ್ಗವಾಗಿ ಹೋದನು ಅಂದನು. ಯಾಕಂದರೆ ಯೆಹೂದದಿಂದ ಬಂದ ದೇವರ ಮನುಷ್ಯನು ಹೋದ ಮಾರ್ಗವನ್ನು ಅವನ ಮಕ್ಕಳು ನೋಡಿದ್ದರು.
1 ಅರಸುಗಳು 13 : 13 (KNV)
ಅವನು ತನ್ನ ಮಕ್ಕಳಿಗೆಕತ್ತೆಗೆ ತಡಿ ಹಾಕಿರಿ ಅಂದನು. ಅವರು ಕತ್ತೆಗೆ ತಡಿ ಹಾಕಿದರು; ಅವನು ಅದರ ಮೇಲೆ ಏರಿ ದೇವರ ಮನುಷ್ಯನ ಹಿಂದೆ ಹೋಗಿ ಅವನು ಏಲಾ ಮರದ ಕೆಳಗೆ ಕುಳಿತುಕೊಳ್ಳುವಾಗ ಅವನನ್ನು ಕಂಡು ಕೊಂಡನು.
1 ಅರಸುಗಳು 13 : 14 (KNV)
ಆಗ ಅವನು--ನೀನು ಯೆಹೂದದಿಂದ ಬಂದ ದೇವರ ಮನುಷ್ಯನೋ ಅಂದನು.
1 ಅರಸುಗಳು 13 : 15 (KNV)
ಅದಕ್ಕ ವನು--ನಾನೇ ಅಂದನು. ಆಗ ಅವನಿಗೆ--ನೀನು ನನ್ನ ಮನೆಗೆ ಬಂದು ರೊಟ್ಟಿ ತಿನ್ನು ಅಂದನು.
1 ಅರಸುಗಳು 13 : 16 (KNV)
ಅದಕ್ಕವನು--ನಾನು ನಿನ್ನ ಸಂಗಡ ಹಿಂತಿರುಗಲೂ ಕೂಡದು, ಒಳಗೆ ಹೋಗಲೂ ಕೂಡದು; ಈ ಸ್ಥಳದಲ್ಲಿ ನಿನ್ನ ಸಂಗಡ ರೊಟ್ಟಿ ತಿನ್ನುವದಿಲ್ಲ, ನೀರು ಕುಡಿಯು ವದಿಲ್ಲ.
1 ಅರಸುಗಳು 13 : 17 (KNV)
ಕರ್ತನ ಮಾತು--ನೀನು ಅಲ್ಲಿ ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ; ಬಂದ ಮಾರ್ಗ ದಿಂದ ತಿರುಗಿ ಹೋಗಬೇಡ ಎಂದು ನನಗೆ ಹೇಳ ಲ್ಪಟ್ಟಿತು ಅಂದನು.
1 ಅರಸುಗಳು 13 : 18 (KNV)
ಇವನು ಅವನಿಗೆ--ನಾನು ನಿನ್ನ ಹಾಗೆಯೇ ಪ್ರವಾದಿಯಾಗಿದ್ದೇನೆ; ಮತ್ತು ಒಬ್ಬ ದೂತನು ಕರ್ತನ ಮಾತಿನಿಂದ ನನಗೆ--ಅವನು ರೊಟ್ಟಿ ತಿಂದು ನೀರು ಕುಡಿಯಲು ಅವನನ್ನು ಹಿಂದಕ್ಕೆ ನಿನ್ನ ಮನೆಗೆ ಕರಕೊಂಡು ಬಾ ಎಂದು ಹೇಳಿದನು ಅಂದನು. ಆದರೆ ಇವನು ಅವನಿಗೆ ಸುಳ್ಳು ಹೇಳಿದನು.
1 ಅರಸುಗಳು 13 : 19 (KNV)
ಹಾಗೆಯೇ ಪ್ರವಾದಿಯು ಇವನ ಸಂಗಡ ಹಿಂದಕ್ಕೆ ಹೋಗಿ ಅವನ ಮನೆಯಲ್ಲಿ ರೊಟ್ಟಿ ತಿಂದು ನೀರು ಕುಡಿದನು.
1 ಅರಸುಗಳು 13 : 20 (KNV)
ಅವರು ಮೇಜಿಗೆ ಕುಳಿತಿರುವಾಗ ಆದದ್ದೇ ನಂದರೆ, ಅವನನ್ನು ಹಿಂದಕ್ಕೆ ಕರತಂದ ಪ್ರವಾದಿಗೆ ಕರ್ತನ ವಾಕ್ಯ ಉಂಟಾಗಿ
1 ಅರಸುಗಳು 13 : 21 (KNV)
ಅವನು ಯೆಹೂದದಿಂದ ಬಂದ ದೇವರ ಮನುಷ್ಯನಿಗೆ--ನೀನು ಕರ್ತನ ಮಾತಿಗೆ ತಿರುಗಿಬಿದ್ದು ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾ ಪಿಸಿದ ಆಜ್ಞೆಯನ್ನು ಕೈಕೊಳ್ಳದೆ ಹಿಂದಕ್ಕೆ ಬಂದುರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ ಎಂದು ಕರ್ತನು ನಿನಗೆ ಹೇಳಿದ ಸ್ಥಳದಲ್ಲಿ
1 ಅರಸುಗಳು 13 : 22 (KNV)
ನೀನು ರೊಟ್ಟಿ ತಿಂದು ನೀರು ಕುಡಿದದ್ದರಿಂದ ನಿನ್ನ ಹೆಣ ನಿನ್ನ ಪಿತೃಗಳ ಸಮಾಧಿಗೆ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ ಎಂದು ಹೇಳಿದನು.
1 ಅರಸುಗಳು 13 : 23 (KNV)
ಅವನು ರೊಟ್ಟಿ ತಿಂದು ನೀರು ಕುಡಿದ ತರುವಾಯ ಇವನು ಕರತಂದ ಪ್ರವಾದಿ ಗೋಸ್ಕರ ಕತ್ತೆಗೆ ತಡಿ ಹಾಕಿದನು.
1 ಅರಸುಗಳು 13 : 24 (KNV)
ಅವನು ಹೋದ ತರುವಾಯ ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು. ಅವನ ಹೆಣ ದಾರಿಯಲ್ಲಿ ಹಾಕ ಲ್ಪಟ್ಟಿತು; ಕತ್ತೆಯೂ ಸಿಂಹವೂ ಹೆಣದ ಬಳಿಯಲ್ಲಿ ನಿಂತುಕೊಂಡಿದ್ದವು.
1 ಅರಸುಗಳು 13 : 25 (KNV)
ಆಗ ಇಗೋ, ಮನುಷ್ಯರು ಹಾದು ಹೋಗಿ ಮಾರ್ಗದಲ್ಲಿ ಬಿದ್ದಿರುವ ಹೆಣವನ್ನೂ ಹೆಣದ ಬಳಿಯಲ್ಲಿ ನಿಂತಿರುವ ಸಿಂಹವನ್ನೂ ನೋಡಿ ವೃದ್ಧ ಪ್ರವಾದಿಯು ವಾಸವಾಗಿರುವ ಪಟ್ಟಣಕ್ಕೆ ಬಂದು ತಿಳಿಸಿದರು;
1 ಅರಸುಗಳು 13 : 26 (KNV)
ಅವನನ್ನು ಮಾರ್ಗದಿಂದ ಹಿಂದಕ್ಕೆ ಕರತಂದ ಪ್ರವಾದಿಯು ಆ ವರ್ತಮಾನವನ್ನು ಕೇಳಿ--ಇವನೇ ಕರ್ತನ ಮಾತಿಗೆ ಅವಿಧೇಯನಾದ ದೇವರ ಮನುಷ್ಯನು; ಕರ್ತನು ಅವನಿಗೆ ಹೇಳಿದ ಮಾತಿನ ಪ್ರಕಾರ ಕರ್ತನು ಅವನನ್ನು ಸಿಂಹಕ್ಕೆ ಒಪ್ಪಿಸಿ ದ್ದಾನೆ; ಅದು ಅವನನ್ನು ಸೀಳಿ ಕೊಂದುಹಾಕಿತು ಅಂದನು.
1 ಅರಸುಗಳು 13 : 27 (KNV)
ತನ್ನ ಮಕ್ಕಳಿಗೆ--ಕತ್ತೆಗೆ ತಡಿಹಾಕಿರಿ ಅಂದನು. ಅವರು ತಡಿ ಹಾಕಿದರು.
1 ಅರಸುಗಳು 13 : 28 (KNV)
ಅವನು ಹೋಗಿ ಇವನ ಹೆಣವು ದಾರಿಯಲ್ಲಿ ಹಾಕಲ್ಪಟ್ಟಿರು ವದನ್ನೂ ಕತ್ತೆಯೂ ಸಿಂಹವೂ ಹೆಣದ ಬಳಿಯಲ್ಲಿ ನಿಂತಿರುವದನ್ನೂ ನೋಡಿದನು.
1 ಅರಸುಗಳು 13 : 29 (KNV)
ಸಿಂಹವು ಹೆಣ ವನ್ನು ತಿನ್ನದೆ ಕತ್ತೆಯನ್ನು ಸೀಳಿ ಹಾಕದೆ ಇತ್ತು. ಆಗ ಪ್ರವಾದಿಯು ದೇವರ ಮನುಷ್ಯನ ಹೆಣವನ್ನು ಎತ್ತಿ ಕತ್ತೆಯ ಮೇಲೆ ಹಾಕಿಕೊಂಡು ಅದನ್ನು ಹಿಂದಕ್ಕೆ ತಂದನು. ಹೀಗೆಯೇ ವೃದ್ಧನಾದ ಪ್ರವಾದಿಯು ಗೋಳಾಡುವದಕ್ಕೂ ಅವನನ್ನು ಹೂಣಿಡುವದಕ್ಕೂ ಪಟ್ಟಣಕ್ಕೆ ತಂದನು.
1 ಅರಸುಗಳು 13 : 30 (KNV)
ಅವನ ಹೆಣವನ್ನು ತನ್ನ ಸಮಾ ಧಿಯಲ್ಲಿ ಹೂಣಿಟ್ಟನು. ಆಗ ಅವರು--ಅಯ್ಯೋ, ನಮ್ಮ ಸಹೋದರನೇ ಎಂದು ಅವನಿಗೋಸ್ಕರ ಗೋಳಾ ಡಿದರು.
1 ಅರಸುಗಳು 13 : 31 (KNV)
ಅವನು ಇವನನ್ನು ಹೂಣಿಟ್ಟ ತರುವಾಯ ಏನಾಯಿತಂದರೆ, ಅವನು ತನ್ನ ಮಕ್ಕಳಿಗೆ--ನಾನು ಸತ್ತಾಗ ದೇವರ ಮನುಷ್ಯನನ್ನು ಹೂಣಿಟ್ಟ ಸಮಾಧಿ ಯಲ್ಲಿ ನನ್ನನ್ನು ಹೂಣಿಡಿರಿ; ನನ್ನ ಎಲುಬುಗಳನ್ನು ಅವನ ಎಲುಬುಗಳ ಬಳಿಯಲ್ಲಿ ಇಡಿರಿ.
1 ಅರಸುಗಳು 13 : 32 (KNV)
ಅವನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿಯೂ ಸಮಾರ್ಯ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಸಮಸ್ತ ಮನೆಗಳಿಗೆ ವಿರೋಧವಾಗಿಯೂ ಕರ್ತನ ಮಾತಿನಂತೆ ನಿಶ್ಚಯವಾಗಿ ಆಗುವದು ಅಂದನು.
1 ಅರಸುಗಳು 13 : 33 (KNV)
ಈ ಕಾರ್ಯದ ತರುವಾಯ ಯಾರೊಬ್ಬಾಮನು ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗದೆ ಉನ್ನತ ಸ್ಥಳಗಳಿಗೆ ಕನಿಷ್ಠ ಯಾಜಕರನ್ನಾಗಿ ನೇಮಿಸಿದನು. ಯಾವನಿಗೆ ಮನಸ್ಸಿತ್ತೋ ಅವನನ್ನು ಇವನು ಪ್ರತಿಷ್ಠೆ ಮಾಡಿಸಿದ್ದರಿಂದ ಉನ್ನತ ಸ್ಥಳಗಳ ಯಾಜಕರಲ್ಲಿ ಒಬ್ಬ ನಾಗುವನು.ಯಾರೊಬ್ಬಾಮನ ಮನೆಯವರನ್ನು ಭೂಲೋಕದಿಂದ ಸಂಹರಿಸುವದಕ್ಕೂ ನಾಶಮಾಡು ವದಕ್ಕೂ ಈ ಕಾರ್ಯವು ಅವರಿಗೆ ಪಾಪವಾಯಿತು.
1 ಅರಸುಗಳು 13 : 34 (KNV)
ಯಾರೊಬ್ಬಾಮನ ಮನೆಯವರನ್ನು ಭೂಲೋಕದಿಂದ ಸಂಹರಿಸುವದಕ್ಕೂ ನಾಶಮಾಡು ವದಕ್ಕೂ ಈ ಕಾರ್ಯವು ಅವರಿಗೆ ಪಾಪವಾಯಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34

BG:

Opacity:

Color:


Size:


Font: